08256-236742/442. Ph :- 9740748742.
news-1

ಎನ್ ಎ ಬಿ ಎಚ್ - ಸೇಪ್ - ಐ ಪ್ರಮಾಣಪತ್

ಉಜಿರೆ ಬೆನಕ ಅಸ್ಪತ್ರೆಗೆ ರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆ ನೀಡುವ ಎನ್ ಎಬಿ ಎಚ್ - ಸೇಪ್ - ಐ ಪ್ರಮಾಣಪತ್ರವನ್ನು ಸಂಸ್ಥೆಯ ಡಾ| ಬಿನೋಯ್ ಅವರು ಆಸ್ಪತ್ರೆಯ ಆಡಳಿತ ಡಾ| ಗೋಪಾಲಕೃಷ್ಣ ಕೆ. ಅವರಿಗೆ ಹಸ್ತಾಂತರಿಸಿದರು. ಪರಿಣಾಮಕಾರಿಯಾಗಿ ಸೋಂಕಿನ ನಿಯಂತ್ರಣ ಪದ್ಧತಿಗಳನ್ನು ಅಳವಡಿಸಿ, ಆಸ್ಪತ್ರೆಗಳಲ್ಲಿ ಆರೋಗ್ಯ ಪರಿಸರವನ್ನು ನಿರ್ಮಿಸಿ ನಿರಂತರ ಗುಣಮಟ್ಟದ ಸುಧಾರಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಡಾ| ಗೋಪಾಲಕೃಷ್ಣ ಕೆ. ಮಾತನಾಡಿ, ಸೋಂಕಿನ ನಿಯಂತ್ರಣವು ಸುರಕ್ಷಿತ ಆರೋಗ್ಯ ಸೇವೆಯ ಮೂಲಾಧಾರವಾಗಿದೆ. ಕಳೆದ ಒಂದು ವರ್ಷದಿಂದ ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗದವರಿಗೆ ರೋಗಾಣುಮುಕ್ತ ಚಿಕಿತ್ಸೆ ನೀಡುವ ಕುರಿತು ಸೂಕ್ತ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಎನ್ ಎ ಬಿ ಎಚ್ ಸಂಸ್ಥೆಯ ಸದಸ್ಯರು ಆಗಾಗ ಆಸ್ಪತೆಗೆ ಭೇಟಿ ನೀಡಿ ಪರೀಕ್ಷೆ ಮತ್ತು ಪರಿಶೀಲನೆ ನಡೆಸಿ ಇತರ ಸೌಲಭ್ಯಗಳನ್ನು ಗಣನೆಗೆ ತೆಗೆದುಕೊಂಡು ಸ್ಥಿರೀಕರಿಸಿದ ಅನಂತರ ಈ ಪ್ರಮಾಣ ಪತ್ರ ನೀಡಲಾಗಿದೆ. ಜಿಲ್ಲೆಯ ಕೆಲವೇ ಆಸ್ಪತ್ರೆಗಳು ರಾಷ್ಟ್ರೀಯ ಸಂಸ್ಥೆಯಿಂದ ಮೌಲ್ಯಾಂಕನಗೊಂಡಿದ್ದು ಈ ಪ್ರಮಾಣಪತ್ರವನ್ನು ತಾಲೂಕಿನಲ್ಲಿಯೇ ಮೊದಲಿಗೆ ಬೆನಕ ಆಸ್ಪತ್ರೆ ಪಡೆದಿರುವುದು ಹೆಮ್ಮೆಯ ಸಂಗತಿ. ವೈದ್ಯರು ಹಾಗೂ ಸಿಬ್ಬಂದಿ ಸಹಕಾರದಿಂದ ಈ ಮಾನ್ಯತೆ ಲಭಿಸಿದೆ. ಈ ಮಾನ್ಯತೆ ನಮ್ಮ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ ಎಂದರು. ಈ ಸಂದರ್ಭ ಉಜಿರೆಯ ಖ್ಯಾತ ಫಿಸಿಶಿಯನ್ ಡಾ| ಅಶ್ವಿನ್ ಉದ್ಯಾವರ ಮತ್ತಿತರರಿದ್ದರು.